Sunday 8 October 2017

ನೀನು

ಕಣ್ಣಂಚಲಿ ಬಚ್ಚಿಡುವೆ ನಿನ್ನ ಓ ಗೆಳತಿ
ಮನಸ್ಸಲ್ಲಿ ಮನೆ ಮಾಡಿ ಇರು ನೀ ಅಲ್ಲಿ
ಕಣ್ಣಲ್ಲಿ ಕಣ್ಣಿಟ್ಟು ಕಾಪಾಡುವೆ ನಾ ನಿನ್ನ
ಹೋಗಬೇಡ ನನ್ನಿಂದ ದೂರ ನೀ ಇನ್ನ
ಓ ಗೆಳಯ, ಯಾಕೆ ಹೀಗೆ ಕಾಪಾಡುವೆ ನೀ ನನ್ನ
ಎಂದಿಗೂ ಇರುವುದಿಲ್ಲ ನೀ ನನ್ನೊಂದಿಗೆ
ಒಂದಲ್ಲ ಒಂದು ದಿನ ಹೋಗುವೆ ದೂರ ನೀನು
ಆಗ ನಾನಾಗುವೆ ನೀರಿಲ್ಲದ ಮೀನು
ಹಾರಲು ಬಿಡು ನನ್ನ, ಬರುವೆ ಪುನಃ ನಿನ್ನ ಬಳಿಯೇ ನಾನು
ಮನಸ್ಸು ಒಂದು ಹಕ್ಕಿ ಆದ್ರೆ ನೀನೇ ಅದರ ಒಡೆಯ
ನಿನ್ನ ಸಖಿಯಾಗಿ ಇರುವಾಸೆ ನನಗೆ
ಆಳಾಗಿ ಇರುವ ಇಚ್ಛೆ ಇಲ್ಲ
ಓ ಗೆಳತಿ, ನನ್ನ ಬಾಳ ಸಂಗಾತಿ ನೀನು
ಕೈ ಬಿಡಲಾರೆ ಎಂದಿಗೂ ನಾ
ಸಪ್ತಪದಿ ತುಳಿದು ಬಾ ನನ್ನ ಮನೆ ಬೆಳಕಾಗಿ
ಕಾರಣ, ನಿನ್ನ ಆಗಮನ ತಂದಿದೆ ನನ್ನ ಕಣ್ಣಲ್ಲಿ ಹೊಳಪು ಹೇಳುತ್ತಾರೆ ಎಲ್ಲ

No comments:

Post a Comment