Sunday 2 July 2017

ಮನುಷ್ಯರೇ ನಾವು

ಹಿಯಾಳಿಸುವರು ನಮ್ಮನ್ನು ಜನ
ಸಮಾಜ ಕೀಲುನೋಟದಲ್ಲಿ ನೋಡುವುದು ನಮ್ಮನ್ನ
'ಹಿಜಡ', 'ಚಕ್ಕಾ', 'ಶಿಖಂಡಿ' ಇನ್ನು ನೂರಾರು ಹೆಸರಿವೆ ನಮಗೆ
ನಾವು ಮನುಷ್ಯರೇ ನಿಮ್ಮ ಹಾಗೆ

ಕೆಲವೊಮ್ಮೆ ಬೈದು ಕಳಿಸಿದರೆ ಇನ್ನೊಮ್ಮೆ ಹೊಡೆಯಲು ಬರುವರು
ನಾವು ಆಚೆ ಗಂಡು ಅಲ್ಲ ಈಚೀ ಹೆಣ್ಣು ಅಲ್ಲ, ನಿಜ ಆದರೆ ಮನುಷ್ಯರೆ
ಹಣಕ್ಕೆ ಕೈ ಚಾಚಿದರೆ, ಅಪಶಬ್ದ ಹೇಳುವರು
ಊಟಕ್ಕೆ ಕೇಳಿದರೆ, ಬೈಗಳದಿಂದ ಹೊಟ್ಟೆ ತುಂಬಿಸುವರು

ಮಾನವ ನೀನಾದರೆ ನಾನು ಮನವನೆ
ಹೃದಯ ನನ್ನಲೂ ಇದೆ ನಿನ್ನ ಹಾಗೆ
ಮೊದಲು, ತುಂಬ ಅಳುತ್ತಿದ್ದೆ ನಾನು
ಈಗ ಅಭ್ಯಾಸವಾಗಿದೆ ನನಗೆ

ಪುಟ್ಟ ಮಗುವಿಗೆ ಆಶೀರ್ವಾದ ನೀಡಲು ನಾನು ಬೇಕು, ಒಳ್ಳೆ ಕೆಲಸಕ್ಕೆ ಹೋಗುವಾಗ ಸಿಕ್ಕಿದರೆ ನಿಂತು, ಹಣ ಕೊಟ್ಟು ಹಿಗುತ್ತಾರೆ
ನಾನೇ ಬಂದರೆ, 'ಚಿ', 'ತು' ಎಂದು ಉಗಿದು ಕಳಿಸುತ್ತಾರೆ

ಎನೋಪ ದೇವರ ಲೀಲೆ ಅವನಿಗೆ ಗೊತ್ತು
ಏನೇ ಆಗಲಿ, ನಮಗೆ ಗೌರವ ಕೊಡಲಿ ಬಿಡಲಿ,
ನಮ್ಮನ್ನು ಒಪ್ಪಲಿ ಒಪ್ಪದೇ ಇರಲಿ
ನಾವು ಮನುಷ್ಯರೇ, ನಿಮ್ಮ ಹಾಗೆ ಎಂದು ಮರೆಯಬೇಡಿ
ನಿಮ್ಮ ಬದುಕಲ್ಲಿ ನಾವು ಬರುವುದಿಲ್ಲ
ನಮ್ಮ ಬದುಕಲ್ಲಿ ನಿಮಗೇನು ಕೆಲಸ?
ಆ ಭಗವಂತ ನಿಮ್ಮ ಹಾಗೆ ನಮಗೂ ಬಾಳು ಕೊಟ್ಟಿರುವ
ನಮ್ಮ ಜೀವನ ನಮ್ಮ ಕೈಯಲ್ಲಿದೆ

ನಿಮಗೆ ಮಾತ್ರವಲ್ಲ ಕಷ್ಟ ನಮಗೂ ಬರುವುದು
ಮೂಕವಿರುತ್ತೇವೆ ಆದರೆ ಮಾತಾಡಲು ಬರುತ್ತದೆ

ಹಂಗಿಸಬೇಡಿ ನಮ್ಮನು, ಭಾವನೆಗಳು ನಮಗೂ ಇವೆ
ಊಹಿಸಬೇಡಿ ನಮ್ಮ ಜೀವನವನ್ನು, ದುಃಖ ನಮ್ಮಲು ಇದೆ

ನಮ್ಮನು ಮಾಡಿದ ಆ ದೇವರಿಗೆ ಬೇಜಾರಿಲ್ಲ,
ಇನ್ನು ಮಾನುಜನಾಗಿ ನಿಮಗೇನು?
ಕೈ ಹಿಡಿದ ಮಾಲೀಕ ಕೈ ಬಿಡಲಾರ
ಇನ್ನು ನಮಗೆ ಬೈಗಳ ಹೇಳುವರು ನೀವು ಯಾರು?
ಹಿಂದೂ, ಮುಸ್ಲಿಂ, ಈಸಾಯಿ ಇದೆಲ್ಲ ನಮಗೆ ಗೋತ್ತಿಲ್ಲ
ಇಂದಿಗೂ, ಎಂದೆಂದಿಗೂ ನಮ್ಮ ಪಾಲಿನ ದೇವರು ಒಬ್ಬನೇ..

No comments:

Post a Comment